•  
  •  
  •  
  •  
Index   ವಚನ - 9    Search  
 
ಗುರುವಿಂಗೆ ಲಿಂಗ ಬಂದು ಗುರುವಾದುದನರಿದು ಮತ್ತರಿಯದೆ ಕೊಟ್ಟನಲ್ಲಾ, ಶಿಷ್ಯನೆಂದು ಆ ಲಿಂಗವ. ಗುರುವಾರೆಂಬುದನರಿಯದ ನಾ, ಶಿಷ್ಯನೆಂದು ಕಟ್ಟಿದೆನಲ್ಲಾ ಆ ಲಿಂಗವ. ಆವ ಬೀಜವ ಬಿತ್ತಿದಡೂ ಆ ಬೀಜವಪ್ಪುದಲ್ಲದೆ ಬೇರೊಂದಪ್ಪುದೆ? ಜ್ಯೋತಿ ಜ್ಯೋತಿಯ ಮುಟ್ಟಿದಂತೆ ಇದಿರೆಡೆಯಿಲ್ಲದೆ ಗುರುಕರಜಾತನ ಮಾಡಬೇಕು. ನಾನು ಕರ್ತು, ಅವನು ಭೃತ್ಯನೆಂದಲ್ಲಿ ಗುರುವಾದನಲ್ಲದೆ, ಅಘಹರ ಶ್ರೀಗುರುವಾದುದಿಲ್ಲ. ಜ್ಞಾನದೀಕ್ಷೆ ಸಂಬಂಧ ಸದ್ಯೋಜಾತಲಿಂಗಕ್ಕೆ.
Transliteration Guruviṅge liṅga bandu guruvādudanaridu mattariyade koṭṭanallā, śiṣyanendu ā liṅgava. Guruvārembudanariyada nā, śiṣyanendu kaṭṭidenallā ā liṅgava. Āva bījava bittidaḍū ā bījavappudallade bērondappude? Jyōti jyōtiya muṭṭidante idireḍeyillade gurukarajātana māḍabēku. Nānu kartu, avanu bhr̥tyanendalli guruvādanallade, aghahara śrīguruvādudilla. Jñānadīkṣe sambandha sadyōjātaliṅgakke.