ಮಧುರ ಚೂರ್ಣಕ್ಕೆ ಕಠಿಣದ ಪದರ ಉಂಟೆ?
ವಿಶ್ವಾಸದಲ್ಲಿ ಪೂಜಿಸುವಾತಂಗೆ
ಉತ್ತಮ ಕನಿಷ್ಠ ಮಧ್ಯಮವೆಂದು ಲಕ್ಷಿಸಲುಂಟೆ?
ಮಾಹೇಶ್ವರ ಅರ್ಚನೆಯ ಮಾಡುವಲ್ಲಿ
ಮಹಾದೇವ ತಪ್ಪದೆಯಿಪ್ಪ,
ಇದು ಭಕ್ತಿವಿಶ್ವಾಸಸ್ಥಲ ಸದ್ಯೋಜಾತಲಿಂಗಕ್ಕೆ.
Transliteration Madhura cūrṇakke kaṭhiṇada padara uṇṭe?
Viśvāsadalli pūjisuvātaṅge
uttama kaniṣṭha madhyamavendu lakṣisaluṇṭe?
Māhēśvara arcaneya māḍuvalli
mahādēva tappadeyippa,
idu bhaktiviśvāsasthala sadyōjātaliṅgakke.