ಮೊನೆಯಿಲ್ಲ[ದೆ] ಮುಂಡವ ಹಿಡಿದು ಇರಿದಲ್ಲಿ
ಗಾಯಕ್ಕೆ ಕುರುಹುಂಟೆ?
ದೇವಪದನಿಷ್ಠೆಯಿಲ್ಲದಲ್ಲಿ ಅರ್ಚಿಸಿ ಪೂಜಿಸಲಿಕ್ಕೆ ದೃಷ್ಟವುಂಟೆ?
ಇದು ಕಾರಣದಲ್ಲಿ
ಕ್ಷುಧೆಗೆ ಅನ್ನ, ಸಮಯಕ್ಕೆ ಕ್ಷಮೆ,
ನೆರೆ ಅರಿದವರಲ್ಲಿ ಹೊರೆಯಿಲ್ಲದ ಕೂಟ,
ಭಕ್ತಿ ಜ್ಞಾನ ಉಭಯಸ್ಥಲಲೇಪ ಸದ್ಯೋಜಾತಲಿಂಗಕ್ಕೆ.
Transliteration Moneyilla[de] muṇḍava hiḍidu iridalli
gāyakke kuruhuṇṭe?
Dēvapadaniṣṭheyilladalli arcisi pūjisalikke dr̥ṣṭavuṇṭe?
Idu kāraṇadalli
kṣudhege anna, samayakke kṣame,
nere aridavaralli horeyillada kūṭa,
bhakti jñāna ubhayasthalalēpa sadyōjātaliṅgakke.