ಇಂತೀ ವರ್ಮಭೇದಂಗಳ ಸ್ಥಲವಿವರಂಗಳ,
ತತ್ವಭೇದಂಗಳ, ನಿರೀಕ್ಷಿಸಿ ನೋಡಿಹೆನೆಂದಡೆ,
ಭೇದಕ್ಕೆ ವಿಭೇದವಾಗಿ ಕಾಬ ಹೊರೆಗೆ ಕಟ್ಟಣೆಯಿಲ್ಲ.
ಹಿಡಿವಲ್ಲಿ ಅಡಿಯ ಕಂಡು, ಬಿಡುವಲ್ಲಿ ಬೇರ ಕಿತ್ತು,
ಬಿಡುಮುಡಿಯನರಿದಲ್ಲಿ ಉಭಯಕಕ್ಷೆಯೆ ಲೋಪ
ಸದ್ಯೋಜಾತಲಿಂಗವನರಿದಲ್ಲಿ.
Transliteration Intī varmabhēdaṅgaḷa sthalavivaraṅgaḷa,
tatvabhēdaṅgaḷa, nirīkṣisi nōḍ'̔ihenendaḍe,
bhēdakke vibhēdavāgi kāba horege kaṭṭaṇeyilla.
Hiḍivalli aḍiya kaṇḍu, biḍuvalli bēra kittu,
biḍumuḍiyanaridalli ubhayakakṣeye lōpa
sadyōjātaliṅgavanaridalli.