ಲಿಂಗವೆ ಅಂಗವಾದ ಮತ್ತೆ ಮುಟ್ಟಿಸಿಕೊಂಬುವರಿನ್ನಾರು?
ಲಿಂಗವೆ ಪ್ರಾಣವಾದ ಮತ್ತೆ ಅರ್ಪಿಸಿಕೊಂಬುವರಿನ್ನಾರು?
ಅಂಗ ಲಿಂಗವೆಂದಡೆ ತನು ಪ್ರಾಪ್ತಿಗೆ ಒಳಗು.
ಮನ ಲಿಂಗವೆಂದಡೆ ಅದು ಭವಕ್ಕೆ ಬೀಜ.
ಈ ಉಭಯದ ಅಳಿವುಳಿವ ತಿಳಿದು,
ಅಂಗ ಮನಸ್ಸು ಒಂದುಗೂಡಿ,
ಪುಂಜವ ಬೆಗಡಿಸುವ ವಜ್ರದ ಮೊನೆಯಂತೆ
ಲಿಂಗದ ಭೇದಗೂಡಿಯೆ ಅಂಗ ನಿರಿಯಾಣವಾದಲ್ಲಿ
ಅದು ಲಿಂಗಾಂಗಿಯ ಸ್ಥಲ ಸದ್ಯೋಜಾತಲಿಂಗಕ್ಕೆ.
Transliteration Liṅgave aṅgavāda matte muṭṭisikombuvarinnāru?
Liṅgave prāṇavāda matte arpisikombuvarinnāru?
Aṅga liṅgavendaḍe tanu prāptige oḷagu.
Mana liṅgavendaḍe adu bhavakke bīja.
Ī ubhayada aḷivuḷiva tiḷidu,
aṅga manas'su ondugūḍi,
pun̄java begaḍisuva vajrada moneyante
liṅgada bhēdagūḍiye aṅga niriyāṇavādalli
adu liṅgāṅgiya sthala sadyōjātaliṅgakke.