•  
  •  
  •  
  •  
Index   ವಚನ - 30    Search  
 
ಲಿಂಗಪ್ರಾಣ ಪ್ರಾಣಲಿಂಗ ಎಂಬ ಉಭಯದ ಮಧ್ಯದಲ್ಲಿ ನಿಂದು ಅರಿದರಿಹಿಸಿಕೊಂಬ ಪರಿಯಿನ್ನೆಂತೊ? ಅದು ತತ್ತಿಯೊಳಗಿದ್ದ ಶುಕ್ಲಶೋಣಿತದಂತೆ. ಆ ತತ್ತಿಯ ಭಿತ್ತಿಯ ಮರೆಯಲ್ಲಿ ಪಕ್ಷಿಯ ಸ್ಪರ್ಶನದಿಂದ ಬಲಿದು, ಭಿತ್ತಿ ಒಡೆದು ಪಕ್ಷಿ ತದ್ರೂಪಾಗಿ ರಟ್ಟೆ ಬಲಿವನ್ನಕ್ಕ, ಇಂತಪ್ಪ ಠಾವಿನಲ್ಲಿದ್ದು ತಾಯಿಯಿತ್ತ ಕುಟುಕ ಕೊಂಡು ಆ ಘಟ ಬಲಿದು, ರಟ್ಟೆಯ ಲಕ್ಷಣ ಯುಕ್ತಿಗೊಂಡು ಚರಿಸಿದ ಭೇದ ಪಿಂಡಜ್ಞಾನಸಂಬಂಧ. ಆ ಗುಣ ಅಭಿಮುಖವಾಗಿ ಚರಿಸಲಿಕ್ಕೆ ಜ್ಞಾನಪಿಂಡಸಂಬಂಧ. ಇಂತು ಪಿಂಡಜ್ಞಾನ ಜ್ಞಾನಪಿಂಡ ಉಭಯಲೇಪ ಸದ್ಯೋಜಾತಲಿಂಗದಲ್ಲಿ.
Transliteration Liṅgaprāṇa prāṇaliṅga emba ubhayada madhyadalli nindu aridarihisikomba pariyinnento? Adu tattiyoḷagidda śuklaśōṇitadante. Ā tattiya bhittiya mareyalli pakṣiya sparśanadinda balidu, bhitti oḍedu pakṣi tadrūpāgi raṭṭe balivannakka, intappa ṭhāvinalliddu tāyiyitta kuṭuka koṇḍu ā ghaṭa balidu, raṭṭeya lakṣaṇa yuktigoṇḍu carisida bhēda piṇḍajñānasambandha. Ā guṇa abhimukhavāgi carisalikke jñānapiṇḍasambandha. Intu piṇḍajñāna jñānapiṇḍa ubhayalēpa sadyōjātaliṅgadalli.