ಅಗ್ನಿಯಂತೆ ಬಾಲವೃದ್ಧತ್ವದಂತೆ ಅಪ್ಪುದಲ್ಲ ಸುರತ್ನದ ಕಳೆ.
ಅಲ್ಪನದಿಗಳ ಬಾಲವೃದ್ಧತ್ವದಂತಪ್ಪುದಲ್ಲ ಮಹಾರ್ಣವ ಸಿಂಧು.
ಆವೇಶದಿಂದ ನಡೆದು, ಆವೇಶದಿಂದ ನುಡಿದು,
ಆವೇಶದಲ್ಲಿ ಪೂಜಿಸಿ,
ಆವೇಶದಿಂದ ಸರ್ವಜ್ಞಾನಿ ನಾನೆಂದು
ಆವೇಶನಿಂದು ಹಿರಣ್ಯದ ವಿಷಕ್ಕೆ ಕೈಯಾಂತು,
ದುತ್ತುರದ ಬಿತ್ತ ಮೆದ್ದವನಂತೆ,
ಲಹರಿಯ ದ್ರವ್ಯವ ಕೊಂಡವನಂತೆ,
ಲಹರಿ ತಿಳಿಯೆ ನಾನಲ್ಲ ಎಂಬವನಂತಾಗದೆ,
ಸ್ವಯ ನಡೆಯಾಗಿ, ಸ್ವಯ ನುಡಿಯಾಗಿ,
ಸ್ವಯಜ್ಞಾನಿ ಸಂಬಂಧಿಯಾಗಿ
ಸದ್ಯೋಜಾತಲಿಂಗವ ಕೂಡಬೇಕು.
Transliteration Agniyante bālavr̥d'dhatvadante appudalla suratnada kaḷe.
Alpanadigaḷa bālavr̥d'dhatvadantappudalla mahārṇava sindhu.
Āvēśadinda naḍedu, āvēśadinda nuḍidu,
āvēśadalli pūjisi,
āvēśadinda sarvajñāni nānendu
āvēśanindu hiraṇyada viṣakke kaiyāntu,
dutturada bitta meddavanante,
lahariya dravyava koṇḍavanante,
lahari tiḷiye nānalla embavanantāgade,
svaya naḍeyāgi, svaya nuḍiyāgi,
svayajñāni sambandhiyāgi
sadyōjātaliṅgava kūḍabēku.