•  
  •  
  •  
  •  
Index   ವಚನ - 53    Search  
 
ಸ್ಪರ್ಶನದಲ್ಲಿ ಇಂಬಿಟ್ಟ ಭೇದವ ಕಂಡು, ಶಬ್ದದಲ್ಲಿ ಸಂಚಾರಲಕ್ಷಣವನರಿತು, ರೂಪಿನಲ್ಲಿ ಚಿತ್ರವಿಚಿತ್ರವಪ್ಪ ಲಕ್ಷಣವ ಲಕ್ಷಿಸಿ, ಗಂಧದಲ್ಲಿ ಸುಗುಣ ದುರ್ಗಣವನರಿವುದು ಒಂದೆ ನಾಸಿಕವಪ್ಪುದಾಗಿ ಒಳಗಿರುವ ಸುಗುಣವಹೊರಗೆ ನೇತಿಗಳೆವ ದುರ್ಗಣ[ವು] ಮುಟ್ಟುವುದಕ್ಕೆ ಮುನ್ನವೇ ಅರಿಯಬೇಕು. ಅರಿಯದೆ ಸೋಂಕಿದಲ್ಲಿ ಅರ್ಪಿತವಲ್ಲಾ ಎಂದು, ಅರಿದು ಸೋಂಕಿದಲ್ಲಿ ಅರ್ಪಿತವೆಂದು ಕುರುಹಿಟ್ಟುಕೊಂಡು ಇಪ್ಪ ಅರಿವು ಒಂದೊ, ಎರಡೊ ಎಂಬುದನರಿದು ರಸದಲ್ಲಿ ಮಧುರ, ಕಹಿ, ಖಾರ, ಲವಣಾಮ್ಲ ಮುಂತಾದವನರಿವ ನಾಲಗೆ ಒಂದೊ? ಐದೊ? ಇಂತೀ ಭೇದವ ಶ್ರುತದಲ್ಲಿ ಕೇಳಿ, ದೃಷ್ಟದಲ್ಲಿ ಕಂಡು, ಅನುಮಾನದಲ್ಲಿ ಅರಿದು ಸದ್ಯೋಜಾತಲಿಂಗದ ಜಿಹ್ವೆಯನರಿತು ಅರ್ಪಿಸಬೇಕು.
Transliteration Sparśanadalli imbiṭṭa bhēdava kaṇḍu, śabdadalli san̄cāralakṣaṇavanaritu, rūpinalli citravicitravappa lakṣaṇava lakṣisi, gandhadalli suguṇa durgaṇavanarivudu onde nāsikavappudāgi oḷagiruva suguṇavahorage nētigaḷeva durgaṇa[vu] muṭṭuvudakke munnavē ariyabēku. Ariyade sōṅkidalli arpitavallā endu, aridu sōṅkidalli arpitavendu Kuruhiṭṭukoṇḍu ippa arivu ondo, eraḍo embudanaridu rasadalli madhura, kahi, khāra, lavaṇāmla muntādavanariva nālage ondo? Aido? Intī bhēdava śrutadalli kēḷi, dr̥ṣṭadalli kaṇḍu, anumānadalli aridu sadyōjātaliṅgada jihveyanaritu arpisabēku.