ಜೀವ ಆತ್ಮನನರಿಯಬೇಕೆಂಬರು,
ಆತ್ಮ ಪರಮಾತ್ಮನನರಿಯಬೇಕೆಂಬರು.
ಇಂತೀ ಆತ್ಮಭೇದವರಿವುದಕ್ಕೆ
ಪದರದ ಹೊರೆಯೆ? ಅಟ್ಟಣೆಯ ಸಂದೆ?
ಅರಿದಲ್ಲಿ ಪರಮ, ಮರೆದಲ್ಲಿ ಜೀವನೆಂಬುದು,
ಆ ಉಭಯವ ಸಂಪಾದಿಸುವುದು ಅರಿವೊ? ಮರವೆಯೊ?
ಬಯಲ ಮರೆಮಾಡಿ ತೆರೆಗಟ್ಟಲಿಕ್ಕೆ ಅವರೊಳಗಾದ ದೃಷ್ಟವ ಕಾಬುದು,
ತೆರೆಯ ತೆಗೆಯಲಿಕ್ಕೆ ಬಯಲ ಕಾಬುದು.
ದೃಕ್ಕಿಂಗೆ ದೃಶ್ಯ ಒಂದೊ ಎರಡೊ ಎಂಬುದ ತಿಳಿದಲ್ಲಿ
ಸದ್ಯೋಜಾತಲಿಂಗದ ಕೂಟ.
Transliteration Jīva ātmananariyabēkembaru,
ātma paramātmananariyabēkembaru.
Intī ātmabhēdavarivudakke
padarada horeye? Aṭṭaṇeya sande?
Aridalli parama, maredalli jīvanembudu,
ā ubhayava sampādisuvudu arivo? Maraveyo?
Bayala maremāḍi teregaṭṭalikke avaroḷagāda dr̥ṣṭava kābudu,
tereya tegeyalikke bayala kābudu.
Dr̥kkiṅge dr̥śya ondo eraḍo embuda tiḷidalli
sadyōjātaliṅgada kūṭa.
Music
Courtesy: