•  
  •  
  •  
  •  
Index   ವಚನ - 71    Search  
 
ನೋಡುವ ಕಣ್ಣ ಕನ್ನಡಿ ನುಂಗಿದ ಮತ್ತೆ, ನೋಡಿ ನೋಡಿಸಿಕೊಂಬವರಿನ್ನಾರು ಹೇಳಾ. ಉಂಬ ಬಾಯಿ ಆಡುವ ಮಡಕೆಯಾದಲ್ಲಿ ಬಡಿಸುವರಿನ್ನಾರು ಹೇಳಾ. ನಿಮ್ಮೊಳಗಾದಲ್ಲಿ ಪೂಜಿಸುವರಿನ್ನಾರು ಹೇಳಾ. ನೀನೆನ್ನೊಳಗಾದಲ್ಲಿ ನಾನಿದಿರಿಟ್ಟು ಮುಟ್ಟುವ ಠಾವ ತೋರಾ. ನಾ ನಿನ್ನವನಾಗಿ ಇತ್ತ, ನೀನು ಎನ್ನವನಾಗಿ ಅತ್ತ, ನನಗೂ ನಿನಗೂ ಮಮತೆ ಬಿಡದಾಗಿ ನಾನು ನೀನು ತತ್ತು ಗೊತ್ತಿನ ಲಕ್ಷಿತರು. ಇದು ಭಕ್ತಿ ವಿಶ್ವಾಸ ಭೇದ, ಸದ್ಯೋಜಾತಲಿಂಗವ ಕೂಡಬೇಕಾದ ಕಾರಣ.
Transliteration Nōḍuva kaṇṇa kannaḍi nuṅgida matte, nōḍi nōḍisikombavarinnāru hēḷā. Umba bāyi āḍuva maḍakeyādalli baḍisuvarinnāru hēḷā. Nim'moḷagādalli pūjisuvarinnāru hēḷā. Nīnennoḷagādalli nānidiriṭṭu muṭṭuva ṭhāva tōrā. Nā ninnavanāgi itta, nīnu ennavanāgi atta, nanagū ninagū mamate biḍadāgi nānu nīnu tattu gottina lakṣitaru. Idu bhakti viśvāsa bhēda, sadyōjātaliṅgava kūḍabēkāda kāraṇa.