ಚಿತ್ರಜ್ಞ ಘಟಲಕ್ಷಣವ ಬರೆಯಬಲ್ಲನಲ್ಲದೆ
ಸಲ್ಲಕ್ಷಣವಪ್ಪ ಆತ್ಮನ ಇರಿಸಬಲ್ಲನೆ?
ಸ್ಥಲದ ಮಾತನಾಡಬಲ್ಲರಲ್ಲದೆ ಸ್ಥಲವ
ನಿರ್ಧಾರವಾಗಿ ನಿಲ್ಲಿಸಿ,
ಸ್ಥಲವೇದಿಸಿ ಭೇದಿಸಿ ನಿಶ್ಚಿಂತವಾದಲ್ಲಿ
ಸದ್ಯೋಜಾತಲಿಂಗ ಬಟ್ಟಬಯಲಾಯಿತ್ತೆನಲಿಲ್ಲ.
Transliteration Citrajña ghaṭalakṣaṇava bareyaballanallade
sallakṣaṇavappa ātmana irisaballane?
Sthalada mātanāḍaballarallade sthalava
nirdhāravāgi nillisi,
sthalavēdisi bhēdisi niścintavādalli
sadyōjātaliṅga baṭṭabayalāyittenalilla.