•  
  •  
  •  
  •  
Index   ವಚನ - 103    Search  
 
ಉಟ್ಟುಡಿಗೆ ಸಡಿಲಿದಡೆ ಕೆಟ್ಟಾಡಿ ಬಂದು ಬಟ್ಟೆಯ ಕಾವ ಲೊಟ್ಟಿಗೆಲ್ಲಿಯದಯ್ಯಾ ಲಿಂಗ! ಗಂಡ ಸತ್ತ ಮುಂಡೆ[ಯವಳಿಗೆ] ಸತ್ತಿಹೆನೆಂಬ ಭಂಡರ ಮುಖವ ನೋಡಲಾಗದು. ಇಷ್ಟವು ನಷ್ಟವಾದಡೆ, ಪ್ರಾಣವ ಬಿಡುವಲ್ಲಿಗೆ ಹೋಗಿ ನಿಕ್ಷೇಪವ ಮಾಡಬಲ್ಲ[ವರಿಗೆ], ಕುಂದ ನುಡಿವ ಮಿಟ್ಟೆಯ ಭಂಡರಿಗೆ, ಆ ಮೋಕ್ಷ ಮುಮುಕ್ಷುತ್ವವಿಲ್ಲ; ಮುನ್ನೇನು ಕಟ್ಟಿಕೊಂಡು ಬಂದನೆ! ಇನ್ನೇನು ಭವಿಯಾಗಿ [ನಿಲ್ಲ], ಸದ್ಯೋಜಾತಲಿಂಗವವರ ಮನವಿದ್ದಲ್ಲಿ ಬೆರೆವ.
Transliteration Uṭṭuḍige saḍilidaḍe keṭṭāḍi bandu baṭṭeya kāva loṭṭigelliyadayyā liṅga! Gaṇḍa satta muṇḍe[yavaḷige] sattihenemba bhaṇḍara mukhava nōḍalāgadu. Iṣṭavu naṣṭavādaḍe, Prāṇava biḍuvallige hōgi nikṣēpava māḍaballa[varige], kunda nuḍiva miṭṭeya bhaṇḍarige, ā mōkṣa mumukṣutvavilla; munnēnu kaṭṭikoṇḍu bandane! Innēnu bhaviyāgi [nilla], sadyōjātaliṅgavavara manaviddalli bereva.