•  
  •  
  •  
  •  
Index   ವಚನ - 104    Search  
 
ದಾರಿಯಲ್ಲಿ ಬೀದಿಯಲ್ಲಿ ಮನೆಗಳಲ್ಲಿ ಹೊನ್ನು ಹೆಣ್ಣು ಮಣ್ಣಿನ ಮೇಲಣ ಕಾಮವಿಕಾರ ತೋರಿದಡೆ ಅದಕ್ಕೇನೂ ಶಂಕೆಯಿಲ್ಲ.ಅದೇನು ಕಾರಣವೆಂದಡೆ: ಚಿತ್ರದ ಹುಲಿ, ಕನಸಿನ ಹಾವು. ಜಲಮಂಡುಕ ಕಚ್ಚಿ ಸತ್ತವರುಂಟೆ? ಇದು ಕಾರಣ ಜಾಗ್ರಸ್ವಪ್ನಸುಷುಪ್ತಿಗಳಲ್ಲಿ ಕಾಮವಿಕಾರ ತೋರಿತ್ತೆಂದು ಶಸ್ತ್ರ ಸಮಾಧಿ ನೀರು ನೇಣು ವಿಷ ಔಷಧಿಗಳಿಂದ ಘಟವ ಬಿಟ್ಟಡೆ, ಆತ ಗುರುದ್ರೋಹಿ, ಲಿಂಗದ್ರೋಹಿ, ಜಂಗಮದ್ರೋಹಿ. ಇದು ಭಕ್ತರಾಚರಣೆ, ವಿರಕ್ತನಿರ್ಣಯ. ಇಂತಪ್ಪವರಿಗೆ ಸದ್ಯೋಜಾತಲಿಂಗವುಂಟಿಲ್ಲವೆಂದೆನು.
Transliteration Dāriyalli bīdiyalli manegaḷalli honnu heṇṇu maṇṇina mēlaṇa kāmavikāra tōridaḍe adakkēnū śaṅkeyilla.Adēnu kāraṇavendaḍe: Citrada huli, kanasina hāvu. Jalamaṇḍuka kacci sattavaruṇṭe? Idu kāraṇa jāgrasvapnasuṣuptigaḷalli kāmavikāra tōrittendu śastra samādhi nīru nēṇu viṣa auṣadhigaḷinda ghaṭava biṭṭaḍe, āta gurudrōhi, liṅgadrōhi, jaṅgamadrōhi. Idu bhaktarācaraṇe, viraktanirṇaya. Intappavarige sadyōjātaliṅgavuṇṭillavendenu.