ಅಂಬರದಲ್ಲಿ ಒಂದು ಕೋಡಗ ಹುಟ್ಟಿ, ಕೊಂಬಿಲ್ಲದೆ ನೆಗೆವುತ್ತಿಹುದ ಕಂಡೆ.
ಮತ್ತಾ ಕೊಂಬಿನ ಮೇಲಣ ಕೋಡಗ ಅಂಬರವ ಕಾಣದೆ,
ಲಂಘಿಸಿ ನಿಲುವುದಕ್ಕೆ ನೆಲದ ಅಂಗವ ಕಾಣದೆ
ಕೊಂಬಿನಲ್ಲಿಯೆಯ್ದುದ ಕಂಡೆ,
ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯದೆ.
Transliteration (Vachana in Roman Script) Ambaradalli ondu kōḍaga huṭṭi, kombillade negevuttihuda kaṇḍe.
Mattā kombina mēlaṇa kōḍaga ambarava kāṇade,
laṅghisi niluvudakke nelada aṅgava kāṇade
kombinalliyeyduda kaṇḍe,
niḥkaḷaṅka mallikārjunaliṅgavanariyade.
Read More