ಅಪರವನರಿತೆನೆಂದು ಪರಮನ ಬಿಡಲೇತಕ್ಕೆ?
ನಿಃಕ್ರೀಯವನರಿತೆನೆಂದು ಕ್ರೀಯ ಬಿಡಲೇಕೆ?
ಭಕ್ತಿಯಿಂದ ಜ್ಞಾನ, ಜ್ಞಾನದಿಂದ ವೈರಾಗ್ಯ,
ವೈರಾಗ್ಯದಿಂದ ನಿಜದ ನಿಶ್ಚಯ.
ಅದಕ್ಕೆ ಸಂದಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Aparavanaritenendu paramana biḍalētakke?
Niḥkrīyavanaritenendu krīya biḍalēke?
Bhaktiyinda jñāna, jñānadinda vairāgya,
vairāgyadinda nijada niścaya.
Adakke sandilla, niḥkaḷaṅka mallikārjunā.
Read More