ಇಷ್ಟಲಿಂಗಕ್ಕವಿರ್ತದ ಭಾಜನದೆಂದು,
ತುತ್ತ ನುಂಗವುದಕ್ಕೊಂದು ಮಿಥ್ಯದ ಭಾಜನದೆಂದು,
ಈ ಅಚ್ಚುಗದಲ್ಲಿ ಬಿದ್ದು ಸಾವರಿಗೆತ್ತಣ ಲಿಂಗಾರ್ಪಿತ ?
ಮಜ್ಜನ ಮಲಿನ ಹೊದ್ದಿಹ ಸುಖ ಶೃಂಗಾರ, ಇವರೊಳಗೆ ವರ್ಜಿತವೆಂದ.
ಲಿಂಗಕ್ಕೊಂದು ಹಂಗು, ತಾನುಂಬದಕ್ಕೆ ಒಂದು ಹಂಗು,
ಇದರಂದವನರಿಯದೆ ಬೆಳದಿಂಗಳಲ್ಲಿ ನಿಂದು, ಹೆಂಡವ ಕೊಂಡವನಂತೆ
ಲಿಂಗದ ಸಂದನೇನ ಬಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Iṣṭaliṅgakkavirtada bhājanadendu,
tutta nuṅgavudakkondu mithyada bhājanadendu,
ī accugadalli biddu sāvarigettaṇa liṅgārpita?
Majjana malina hoddiha sukha śr̥ṅgāra, ivaroḷage varjitavenda.
Liṅgakkondu haṅgu, tānumbadakke ondu haṅgu,
idarandavanariyade beḷadiṅgaḷalli nindu, heṇḍava koṇḍavanante
liṅgada sandanēna balla, niḥkaḷaṅka mallikārjunā.
Read More