ಒಂದ ಕಂಡು ಒಂದನರಿದೆಹೆನೆಂಬನ್ನಕ್ಕ,
ಸಂದೇಹಪದದಲ್ಲಿ ಅರಿವುದಿನ್ನೇನೋ ?
ಒಂದನರಿತು, ಒಂದ ಮರೆತು, ಬೇರೊಂದ ಕಂಡಹೆನೆನುವ ಒಡಲದೇನೋ ?
ಆ ದ್ವಂದ್ವವಳಿದು, ನಿಂದ ನಿಜವೆ ಸಂದೇಹಕ್ಕೆ ಒಡಲಿಲ್ಲ ನಿಂದುದು,
ಷಡುಸ್ಥಲಭರಿತ ಪರಿಪೂರ್ಣ ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Onda kaṇḍu ondanaridehenembannakka,
sandēhapadadalli arivudinnēnō?
Ondanaritu, onda maretu, bēronda kaṇḍahenenuva oḍaladēnō?
Ā dvandvavaḷidu, ninda nijave sandēhakke oḍalilla nindudu,
ṣaḍusthalabharita paripūrṇa niḥkaḷaṅka mallikārjunā.
Read More