ಕಣ್ಣಿಲ್ಲದವಂಗೆ ಬಣ್ಣಬಚ್ಚಣೆಯೇಕೆ ?
ಮನ್ನಣೆಯಿಲ್ಲದ ಠಾವಿನಲ್ಲಿ ಅಣ್ಣ ಅಪ್ಪ ಎನಲೇಕೆ ?
ನನ್ನಿಯ ಗುಣವಿಲ್ಲದಲ್ಲಿಗೆ,
ಪನ್ನಗಧರನ ಶರಣರು ಮತ್ತಲ್ಲಿಗೆ ಹೋದಡೆ,
ಕಾಲಿಗೆ ತಾಗಿದ ಸರಳ ಕಂತಾಯಿತ್ತು.
ಬಲ್ಲವರಿಗೆ ಇದೇ ಗುಣವೆಂದೆ, ಪ್ರಾಣವಲ್ಲಭ
ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Kaṇṇilladavaṅge baṇṇabaccaṇeyēke?
Mannaṇeyillada ṭhāvinalli aṇṇa appa enalēke?
Nanniya guṇavilladallige,
pannagadharana śaraṇaru mattallige hōdaḍe,
kālige tāgida saraḷa kantāyittu.
Ballavarige idē guṇavende, prāṇavallabha
niḥkaḷaṅka mallikārjunā.
Read More