•  
  •  
  •  
  •  
Index   ವಚನ - 274    Search  
 
ಕೃತಯುಗಕ್ಕರಸು ಶೂಲಿ, ತ್ರೇತಾಯುಗಕ್ಕರಸು ರಘು. ದ್ವಾಪರಕ್ಕರಸು ಸರಸ್ವತೀಪತಿ, ಕಲಿಯುಗಕ್ಕರಸು ರಾಮ ರಾವಣ. ಇವರೊಳಗಾದ ಚಕ್ರವರ್ತಿಗಳು, ನರಕುಲಜಾತಿ, ಪುಣ್ಯಪಾಪವೆಂಬ ಅರಸುತನಕ್ಕೊಳಗಾದರಯ್ಯಾ. ಕೃತಯುಗದಲ್ಲಿ ಆ ಶೂಲಿ ಆಚಾರ್ಯನಾದ. ತ್ರೇತಾಯುಗದಲ್ಲಿ ಆ ರಘು ದಶಾವತಾರನಾದ. ದ್ವಾಪರಯುಗದಲ್ಲಿ ಆ ಬ್ರಹ್ಮ ಚತುರ್ಮುಖನಾದ. ಕಲಿಯುಗದಲ್ಲಿ ಷಡ್ದರ್ಶನ ಪಲ್ಲವಿಸಿತ್ತು. ಈ ದೃಷ್ಟವ ಹಂಚಿಕೊಂಡರು. ದೃಷ್ಟವ ಕಾಬುದಕ್ಕೆ ಮಟ್ಟನಿರಿಸಿ ಪ್ರಳಯಗತರಾದರಯ್ಯ. ಮೂರರೊಳಗಲ್ಲದ, ಆರಕ್ಕತೀತನ ತೋರಲಿಲ್ಲದ ಘನವ ಮೀರಿ ನಿಂದವರಾರೋ ? ಸೂರೆಯೊಳು ಗಾರಾದವರಿಗೆ ಮೀರಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
Transliteration Kr̥tayugakkarasu śūli, trētāyugakkarasu raghu. Dvāparakkarasu sarasvatīpati, kaliyugakkarasu rāma rāvaṇa. Ivaroḷagāda cakravartigaḷu, narakulajāti, puṇyapāpavemba arasutanakkoḷagādarayyā. Kr̥tayugadalli ā śūli ācāryanāda. Trētāyugadalli ā raghu daśāvatāranāda. Dvāparayugadalli ā brahma caturmukhanāda. Kaliyugadalli ṣaḍdarśana pallavisittu. Ī dr̥ṣṭava han̄cikoṇḍaru. Dr̥ṣṭava kābudakke maṭṭanirisi praḷayagatarādarayya. Mūraroḷagallada, ārakkatītana tōralillada ghanava mīri nindavarārō? Sūreyoḷu gārādavarige mīralilla, niḥkaḷaṅka mallikārjunā.