ಕೋಳು ಹೋದ ಮತ್ತೆ ಕಾಳಗದ ಇರವೇಕೆ ?
ಜಾಣನಾದ ಮತ್ತೆ ಕೇಳಲೇಕೆ ಆರುವನು ?
ಜ್ಞಾನಿಯಾದ ಮತ್ತೆ ಬಾಳಲೇಕೆ ಭವದಲ್ಲಿ?
ಇದು ವೇಣುವಿನೊಳಗಣ ಕಿಚ್ಚಿನಂತಾಯಿತ್ತು.
ಇದಕ್ಕೆ ಜಾಣತನವೆ, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script)Kōḷu hōda matte kāḷagada iravēke?
Jāṇanāda matte kēḷalēke āruvanu?
Jñāniyāda matte bāḷalēke bhavadalli?
Idu vēṇuvinoḷagaṇa kiccinantāyittu.
Idakke jāṇatanave, niḥkaḷaṅka mallikārjunā. Read More
ವಚನಕಾರ ಮಾಹಿತಿ
ಮೋಳಿಗೆ ಮಾರಯ್ಯ
ಅಂಕಿತನಾಮ:
ನಿ:ಕಳಂಕ ಮಲ್ಲಿಕಾರ್ಜುನ
ವಚನಗಳು:
815
ಕಾಲ:
12ನೆಯ ಶತಮಾನ
ಕಾಯಕ:
ಮಹಾರಾಜ-ಕಾಡಿನಿಂದ ಉರುವಲು ಕಟ್ಟಿಗೆ ತಂದು ಊರೊಳಗೆ ಮಾರುವುದು.