•  
  •  
  •  
  •  
Index   ವಚನ - 309    Search  
 
ಗುರುಲಿಂಗಜಂಗಮಕ್ಕೆ ತನುಮನಧನವಂ ಸವೆಸಿ, ದೃಢಚಿತ್ತವಿಲ್ಲದೆ ಪೊಡವಿಯ ಜನಂಗಳು ಮೆಚ್ಚಬೇಕೆಂದು, ಮೃಢನ ಭಕ್ತರಿಗೆ ನೆರೆನಿಶ್ಚಟವುಂಟೆನಿಸಿಕೊಂಡೆಹೆನೆಂಬ ಧಾರುಣಿಯ ಚೋರರಿಗೆಲ್ಲಿಯದೊ ನಿಜಭಕ್ತಿ, ನಿಃಕಳಂಕ ಮಲ್ಲಿಕಾರ್ಜುನಾ ?
Transliteration Guruliṅgajaṅgamakke tanumanadhanavaṁ savesi, dr̥ḍhacittavillade poḍaviya janaṅgaḷu meccabēkendu, mr̥ḍhana bhaktarige nereniścaṭavuṇṭenisikoṇḍ'̔ehenemba dhāruṇiya cōrarigelliyado nijabhakti, niḥkaḷaṅka mallikārjunā?