ಚಂದ್ರಕಾಂತಶಿಲೆಯನೊಂದು ಹಿಳಿದಲ್ಲಿ, ಬಿಂದು ಬಂದುದುಂಟೆ ?
ಸುಗಂಧದ ನನೆಯ ತಂದು ಬಂಧಿಸಿದಲ್ಲಿ, ಆ ಸುವಾಸನೆ ಬಂದುದುಂಟೆ ?
ಆ ಕಿರಣ ಪರುಷಶಿಲೆ ಸತಿಯಾಗಿ ಬೆರಸಿದಲ್ಲಿ, ಬಿಂದುರೂಪಾಯಿತ್ತು.
ರಿತುಕಾಲಕ್ಕೆ ಕುಸುಮ ಬಲಿಯಲಾಗಿ, ಸುವಾಸನೆಯೆಸಗಿತ್ತು.
ಇಂತೀ ಉಭಯದಿಂದ ಅರಿವಲ್ಲಿ, ಸ್ಥಲಸ್ಥಲವ ನೆಮ್ಮಿ ನಿಃಸ್ಥಲವನರಿತಲ್ಲಿ,
ದೃಷ್ಟದ ಇಷ್ಟ ಅಲ್ಲಿಯೇ ಲೇಪ, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Candrakāntaśileyanondu hiḷidalli, bindu banduduṇṭe?
Sugandhada naneya tandu bandhisidalli, ā suvāsane banduduṇṭe?
Ā kiraṇa paruṣaśile satiyāgi berasidalli, bindurūpāyittu.
Ritukālakke kusuma baliyalāgi, suvāsaneyesagittu.
Intī ubhayadinda arivalli, sthalasthalava nem'mi niḥsthalavanaritalli,
dr̥ṣṭada iṣṭa alliyē lēpa, niḥkaḷaṅka mallikārjunā.
Read More