ಚೇತನವಳಿದು ಅಚೇತನವಸ್ತು ರೂಪಾಗಿ ಬಂದಿತ್ತದೇತಕ್ಕೆ ಎಂಬುದು ತಿಳಿದು,
ಬಂಗಾರವ ಕಳೆದು ಬಣ್ಣವ ನೋಡಬಾರದು.
ಕುಸುಮವ ಕಳೆದು ಗಂಧವ ಕಾಣಬಾರದು.
ದರ್ಪಣದ ಘಟವ ಕಳೆದು ನೋಡಲಿಕ್ಕೆ ಪ್ರತಿಬಿಂಬಿಸುವುದೆ ?
ಅಂಗವ ಕಳೆದು ಲಿಂಗವನರಿಯಬಾರದು.
ಲಿಂಗವ ಕಳೆದು ಆತ್ಮನನರಿವ ಪರಿಯಿನ್ನೆಂತೊ ?
ಆತ್ಮನ ಚೇತನವ ಬಿಟ್ಟು ಹಿತಜ್ಞಾನವರಿಯಬೇಕೆಂಬ ಅಜಾತರು ಕೇಳಿರೊ.
ಅಂಗವ ಕಳೆದು ಲಿಂಗವ ಕಂಡೆನೆಂಬುದು,
ಲಿಂಗವಳಿದು ಆತ್ಮನನರಿದೆನೆಂಬುದು, ಆತ್ಮನಳಿದು ಅರಿವನರಿದೆನೆಂಬುದು,
ಅದೇತರ ಪರಿ ಹೇಳಾ.
ತೃಷೆಯರತು ನೀರ ಕೊಳಬಹುದೆ ?
ಆಪ್ಯಾಯನವನರತು ಓಗರವನುಣಬಹುದೆ ?
ಸತ್ಕ್ರೀಯಿಲ್ಲದೆ ಲಿಂಗವನರಿಯಬಹುದೆ ?
ಆ ಲಿಂಗಕ್ಕೆ ಅರ್ಚನೆ ಪೂಜನೆ ಹೀನವಾಗಿ ವಸ್ತುವನರಿತೆನೆಂಬ
ನಿಶ್ಚಿಯವಂತರು ನೀವೇ ಬಲ್ಲಿರಿ, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Cētanavaḷidu acētanavastu rūpāgi bandittadētakke embudu tiḷidu,
baṅgārava kaḷedu baṇṇava nōḍabāradu.
Kusumava kaḷedu gandhava kāṇabāradu.
Darpaṇada ghaṭava kaḷedu nōḍalikke pratibimbisuvude?
Aṅgava kaḷedu liṅgavanariyabāradu.
Liṅgava kaḷedu ātmananariva pariyinnento?
Ātmana cētanava biṭṭu hitajñānavariyabēkemba ajātaru kēḷiro.
Aṅgava kaḷedu liṅgava kaṇḍenembudu,
liṅgavaḷidu ātmananaridenembudu, ātmanaḷidu arivanaridenembudu,
adētara pari hēḷā.
Tr̥ṣeyaratu nīra koḷabahude?
Āpyāyanavanaratu ōgaravanuṇabahude?
Satkrīyillade liṅgavanariyabahude?
Ā liṅgakke arcane pūjane hīnavāgi vastuvanaritenemba
niściyavantaru nīvē balliri, niḥkaḷaṅka mallikārjunā.
Read More