ಪಂಚಭೌತಿಕದಿಂದ ಬಂದ ತನುವಿನಲ್ಲಿ,
ಪಂಚಮುಖವನರಿವುದೆ ದೃಷ್ಟ.
ಸಂಚಿತವ ಹರಿದ ವಸ್ತುವನರಿವುದಕ್ಕೆ,
ಸಂಚಾರ ಹಿಂಗಿ ಅರಿವುದೆ ದೃಷ್ಟ.
ಈ ಉಭಯಸಂಚವನರಿದು ಮುಂಚಬಲ್ಲಡೆ, ಆತನೆ ಲಿಂಗೈಕ್ಯ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script)Pan̄cabhautikadinda banda tanuvinalli,
pan̄camukhavanarivude dr̥ṣṭa.
San̄citava harida vastuvanarivudakke,
san̄cāra hiṅgi arivude dr̥ṣṭa.
Ī ubhayasan̄cavanaridu mun̄caballaḍe, ātane liṅgaikya,
niḥkaḷaṅka mallikārjunā. Read More
ವಚನಕಾರ ಮಾಹಿತಿ
ಮೋಳಿಗೆ ಮಾರಯ್ಯ
ಅಂಕಿತನಾಮ:
ನಿ:ಕಳಂಕ ಮಲ್ಲಿಕಾರ್ಜುನ
ವಚನಗಳು:
815
ಕಾಲ:
12ನೆಯ ಶತಮಾನ
ಕಾಯಕ:
ಮಹಾರಾಜ-ಕಾಡಿನಿಂದ ಉರುವಲು ಕಟ್ಟಿಗೆ ತಂದು ಊರೊಳಗೆ ಮಾರುವುದು.