ಪೃಥ್ವಿಯಿಂದ ಅಪ್ಪು, ಅಪ್ಪುವಿನಿಂದ ಪೃಥ್ವಿ.
ಅಗ್ನಿಯಿಂದ ವಾಯು, ವಾಯುವಿನಿಂದ ಅಗ್ನಿ.
ಆಕಾಶದಿಂದ ಮಹದಾಕಾಶ, ಮಹದಾಕಾಶದಿಂದ ಆಕಾಶ.
ನಿನ್ನಿಂದ ನಾ, ನನ್ನಿಂದ ನೀ,
ನಾ ನೀನೆಂಬ ಭಾವ ಲೀಲೆವುಳ್ಳನ್ನಕ್ಕ.
ಮತ್ತೆ ತಿಳಿದು ನೋಡಲಿಕ್ಕೆ ಮತ್ತೆಯೂ ಪರಿಪೂರ್ಣ ನೀನೆ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Pr̥thviyinda appu, appuvininda pr̥thvi.
Agniyinda vāyu, vāyuvininda agni.
Ākāśadinda mahadākāśa, mahadākāśadinda ākāśa.
Ninninda nā, nanninda nī,
nā nīnemba bhāva līlevuḷḷannakka.
Matte tiḷidu nōḍalikke matteyū paripūrṇa nīne,
niḥkaḷaṅka mallikārjunā.
Read More