ಬಯಲೊಳಗಣ ಬಯಲಿನಲ್ಲಿ ಒಂದು ಕಲ್ಪತರು ಹುಟ್ಟಿ,
ಫಲವಿಲ್ಲದೆ ಬಂಜೆಮರನಾದುದ ಕಂಡೆ.
ಇದ ತಿಳಿದು ನೋಡಲಿಕ್ಕಾಗಿ ಬಯಲು ಬಯಲ ಕೂಡಿ,
ಕಲ್ಪತರು ಫಲವು ಎಡಬಿಡವಿಲ್ಲದುದ ಕಂಡೆ,
ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯಲಾಗಿ.
Transliteration (Vachana in Roman Script) Bayaloḷagaṇa bayalinalli ondu kalpataru huṭṭi,
phalavillade ban̄jemaranāduda kaṇḍe.
Ida tiḷidu nōḍalikkāgi bayalu bayala kūḍi,
kalpataru phalavu eḍabiḍavilladuda kaṇḍe,
niḥkaḷaṅka mallikārjunaliṅgavanariyalāgi.
Read More