ಬಾಲಲೀಲೆಯಲ್ಲಿ ಕಟ್ಟಿದ ಲಿಂಗವನೇನೆಂದರಿಯದಿರ್ದಲ್ಲಿ,
ಜ್ಞಾನಭಾವ ತಲೆದೋರಿದಲ್ಲಿ ಇದೇನೆಂದರಿಯಬೇಕು.
ಮಕ್ಕಳ ಮದುವೆಯ ಚಿಕ್ಕಂದು ಮಾಡಿದಡೆ,
ಯೌವನದೋರೆ, ಆ ವಿಷಯಕ್ಕೆ ಹೊಕ್ಕು,
ಹೋರಟೆಗೊಂಬುದ ಮರೆದಡೆ,
ಇಷ್ಟವ ಮರೆಯಬೇಕು, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script)Bālalīleyalli kaṭṭida liṅgavanēnendariyadirdalli,
jñānabhāva taledōridalli idēnendariyabēku.
Makkaḷa maduveya cikkandu māḍidaḍe,
yauvanadōre, ā viṣayakke hokku,
hōraṭegombuda maredaḍe,
iṣṭava mareyabēku, niḥkaḷaṅka mallikārjunā. Read More
ವಚನಕಾರ ಮಾಹಿತಿ
ಮೋಳಿಗೆ ಮಾರಯ್ಯ
ಅಂಕಿತನಾಮ:
ನಿ:ಕಳಂಕ ಮಲ್ಲಿಕಾರ್ಜುನ
ವಚನಗಳು:
815
ಕಾಲ:
12ನೆಯ ಶತಮಾನ
ಕಾಯಕ:
ಮಹಾರಾಜ-ಕಾಡಿನಿಂದ ಉರುವಲು ಕಟ್ಟಿಗೆ ತಂದು ಊರೊಳಗೆ ಮಾರುವುದು.