ಬೆಲ್ಲದ ಗೋಟು ಕುಬ್ಜವಾದಡೇನು,
ಅದರ ಸಿಹಿಯೆಲ್ಲಕ್ಕೂ ಗುಡ್ಡನೆ ?
ಮುಕುರದ ಸಾಕಾರ ಚಿಕ್ಕದಾದಡೇನು,
ಅದರ ಪ್ರತಿಬಿಂಬ ಚಿಕ್ಕದೆ ಅಯ್ಯಾ ?
ಸಕಲರೊಳು ತನು ಕೂಡಿರ್ದಡೇನು,
ವಿಕಳನಾಗದಿರ್ದಡೆ ಸಾಲದೆ ?
ಆತನಿರವು ಘೃತಕ್ಷೀರದಂತೆ, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Bellada gōṭu kubjavādaḍēnu,
adara sihiyellakkū guḍḍane?
Mukurada sākāra cikkadādaḍēnu,
adara pratibimba cikkade ayyā?
Sakalaroḷu tanu kūḍirdaḍēnu,
vikaḷanāgadirdaḍe sālade?
Ātaniravu ghr̥takṣīradante, niḥkaḷaṅka mallikārjunā.
Read More