ಭಕ್ತಂಗೆ ಪೃಥ್ವಿಯಂಗವಾಗಿ, ಮಾಹೇಶ್ವರಂಗೆ ಅಪ್ಪುವಂಗವಾಗಿ,
ಪ್ರಸಾದಿಗೆ ಅಗ್ನಿಯಂಗವಾಗಿ, ಪ್ರಾಣಲಿಂಗಿಗೆ ಪವನನಂಗವಾಗಿ,
ಶರಣಂಗೆ ಆಕಾಶವಂಗವಾಗಿ, ಐಕ್ಯಂಗೆ ಮಹಾಬೆಳಗೆ ಅಂಗವಾದಲ್ಲಿ,
ಪಂಚತತ್ವ ಕೂಡಿ ಒಂದರಲ್ಲಿ ಎಯ್ದುವಲ್ಲಿ, ಷಡುಸ್ಥಲ ರೂಪಾಯಿತ್ತು.
ಆರು ವರ್ಣಕ್ಕೆ ಅಪ್ಪು ಅರಸಾದಂತೆ,
ಏಕಛತ್ರ ಮಹಾರಾಜ ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Bhaktaṅge pr̥thviyaṅgavāgi, māhēśvaraṅge appuvaṅgavāgi,
prasādige agniyaṅgavāgi, prāṇaliṅgige pavananaṅgavāgi,
śaraṇaṅge ākāśavaṅgavāgi, aikyaṅge mahābeḷage aṅgavādalli,
pan̄catatva kūḍi ondaralli eyduvalli, ṣaḍusthala rūpāyittu.
Āru varṇakke appu arasādante,
ēkachatra mahārāja nīne, niḥkaḷaṅka mallikārjunā.
Read More