ಭಕ್ತಿ ಜ್ಞಾನ ಕ್ರೀ ಮಾಡುವ ಮಾಟಂಗಳಲ್ಲಿ,
ಚಿತ್ತಶುದ್ಧವಿಲ್ಲದ ಸತಿಯಾದಡೂ ಒಲ್ಲೆ,
ಪುತ್ರ ಬಂಧುಗಳಾದಡೂ ಒಲ್ಲೆ.
ಇಂತೀ ಇವನರಿತು ಕೂಡಿದೆನಾದಡೆ,
ಎನ್ನ ಭಾವಕ್ಕೆ ಇದೆ ಭಂಗ.
ಇದು ಪ್ರಸನ್ನವಪ್ಪ ಭಕ್ತಿಯ ಬೆಳೆ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script)Bhakti jñāna krī māḍuva māṭaṅgaḷalli,
cittaśud'dhavillada satiyādaḍū olle,
putra bandhugaḷādaḍū olle.
Intī ivanaritu kūḍidenādaḍe,
enna bhāvakke ide bhaṅga.
Idu prasannavappa bhaktiya beḷe,
niḥkaḷaṅka mallikārjunā. Read More
ವಚನಕಾರ ಮಾಹಿತಿ
ಮೋಳಿಗೆ ಮಾರಯ್ಯ
ಅಂಕಿತನಾಮ:
ನಿ:ಕಳಂಕ ಮಲ್ಲಿಕಾರ್ಜುನ
ವಚನಗಳು:
815
ಕಾಲ:
12ನೆಯ ಶತಮಾನ
ಕಾಯಕ:
ಮಹಾರಾಜ-ಕಾಡಿನಿಂದ ಉರುವಲು ಕಟ್ಟಿಗೆ ತಂದು ಊರೊಳಗೆ ಮಾರುವುದು.