ಭಕ್ತಿಸ್ಥಲ ಅಳವಟ್ಟವಂಗೆ ಮಾಹೇಶ್ವರಸ್ಥಲವಿಲ್ಲ.
ಮಾಹೇಶ್ವರಸ್ಥಲ ಅಳವಟ್ಟವಂಗೆ ಪ್ರಸಾದಿಸ್ಥಲವಿಲ್ಲ.
ಪ್ರಸಾದಿಸ್ಥಲ ಅಳವಟ್ಟವಂಗೆ ಪ್ರಾಣಲಿಂಗಿಸ್ಥಲವಿಲ್ಲ.
ಪ್ರಾಣಲಿಂಗಿಸ್ಥಲ ಅಳವಟ್ಟವಂಗೆ ಶರಣಸ್ಥಲವಿಲ್ಲ.
ಶರಣಸ್ಥಲ ಅಳವಟ್ಟವಂಗೆ ಐಕ್ಯಸ್ಥಲವಿಲ್ಲ.
ಐಕ್ಯಸ್ಥಲ ಅಳವಟ್ಟಂಗೆ ನಾನಾಸ್ಥಲ ನಿಃಸ್ಥಲವಾಯಿತ್ತು.
ಸ್ಥಳಕ್ಕೆ ಕ್ರೀಯಾಗಿ, ನಿಃಸ್ಥಲಕ್ಕೆ ನಿರವಯವಾಗಿ,
ನಿಜವಾದೆಯಲ್ಲಾ ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Bhaktisthala aḷavaṭṭavaṅge māhēśvarasthalavilla.
Māhēśvarasthala aḷavaṭṭavaṅge prasādisthalavilla.
Prasādisthala aḷavaṭṭavaṅge prāṇaliṅgisthalavilla.
Prāṇaliṅgisthala aḷavaṭṭavaṅge śaraṇasthalavilla.
Śaraṇasthala aḷavaṭṭavaṅge aikyasthalavilla.
Aikyasthala aḷavaṭṭaṅge nānāsthala niḥsthalavāyittu.
Sthaḷakke krīyāgi, niḥsthalakke niravayavāgi,
nijavādeyallā niḥkaḷaṅka mallikārjunā.
Read More