ಭಕ್ತಿಸ್ಥಲವಳವಟ್ಟಲ್ಲಿ, ಮಾಟಕೂಟವೆಂಬ ಕೋಟಲೆಯೇತಕ್ಕೆ ?
ಮಾಹೇಶ್ವರಸ್ಥಲವಳವಟ್ಟಲ್ಲಿ, ಅಹುದು ಅಲ್ಲಾ ಎಂಬ ದುಃಖವೇತಕ್ಕೆ ?
ಪ್ರಸಾದಿಸ್ಥಲವಳವಟ್ಟಲ್ಲಿ,
ಉಂಡೆಹೆ ಉಟ್ಟೆಹೆನೆಂಬ ದಂದುಗವೇತಕ್ಕೆ ?
ಪ್ರಾಣಲಿಂಗಿಸ್ಥಲವಳವಟ್ಟಲ್ಲಿ, ಜನನ ಮರಣವೆಂಬ ಕುರುಹೇತಕ್ಕೆ ?
ಶರಣಸ್ಥಲವಳವಟ್ಟಲ್ಲಿ, ಸುಖದುಃಖ ಭೋಗಾಧಿಗಳಲ್ಲಿ
ಹೊಡೆಗೆಡೆಯಲೇತಕ್ಕೆ ?
ಐಕ್ಯಸ್ಥಲವಳವಟ್ಟಲ್ಲಿ, ನಾಮರೂಪಕ್ರೀಯೆಂದು ಭಾವವ ಲಕ್ಷಿಸಲೇತಕ್ಕೆ ?
ಇಂತಿವು ಆರಂಕಣದ ಮನೆಯ ಬಾಡಿಗೆಯ ಹಿಡಿದು,
ಮೀರಿತು ಘನ ಕಿರಿದೆಂದು ಹೊಯಿದಾಡುವಂತೆ,
ಈ ದೂರ ಇನ್ನಾರಿಗೆ ಹೇಳುವೆ, ನಿಃಕಳಂಕ ಮಲ್ಲಿಕಾರ್ಜುನಾ ?
ಗಾರಾಗದ ಮುನ್ನವೆ ತೋರಿಕೆಯೇತಕ್ಕಡಗದು ?
Transliteration Bhaktisthalavaḷavaṭṭalli, māṭakūṭavemba kōṭaleyētakke?
Māhēśvarasthalavaḷavaṭṭalli, ahudu allā emba duḥkhavētakke?
Prasādisthalavaḷavaṭṭalli,
uṇḍ'̔ehe uṭṭehenemba dandugavētakke?
Prāṇaliṅgisthalavaḷavaṭṭalli, janana maraṇavemba kuruhētakke?
Śaraṇasthalavaḷavaṭṭalli, sukhaduḥkha bhōgādhigaḷalli
Hoḍegeḍeyalētakke?
Aikyasthalavaḷavaṭṭalli, nāmarūpakrīyendu bhāvava lakṣisalētakke?
Intivu āraṅkaṇada maneya bāḍigeya hiḍidu,
mīritu ghana kiridendu hoyidāḍuvante,
ī dūra innārige hēḷuve, niḥkaḷaṅka mallikārjunā?
Gārāgada munnave tōrikeyētakkaḍagadu?