•  
  •  
  •  
  •  
Index   ವಚನ - 632    Search  
 
ಮಾಂಸಪಿಂಡವ ಕಳೆದು ಮಂತ್ರಪಿಂಡವ ಮಾಡಿದೆವೆಂದು ಸಂತೈಸಿಕೊಂಬಾದ್ಯರು ನೀವು ಕೇಳಿರಯ್ಯಾ. ಭ್ರಮರ ಕೀಟಕವ ತಂದಳಿದು ತನ್ನಂತೆ ಮಾಡಿದುದಿಲ್ಲವೆ ? ಚಕ್ರ ಮೃತ್ತಿಕೆಯ ತಂದು ತನ್ನ ನೆನಹಿನಲ್ಲಿ ತೋರಿದ ಗುಣ ಕುಂಭವ ಮಾಡಿದುದಿಲ್ಲವೆ ? ಕಾರುಕಶಿಲೆಯ ತಂದು ತನ್ನ ಮನಕ್ಕೆ ತೋರಿದ ಸ್ವರೂಪವ ಮಾಡಿದುದಿಲ್ಲವೆ ? ಇಂತಿವೆಲ್ಲವು ಹಿಡಿದವರ ಗುಣಕ್ಕೊಳಗಾದವು. ಇದನರಿಯದೆ ನಾವು ಗುರುವಾದೆವೆಂದು, ಇದಿರು ಶಿಷ್ಯರೆಂದು ಭಾವಿಸಿ, ಸೇವೆಯ ಕೊಂಬ ಗುರು, ಹರಿದ ಹರುಗೋಲನೇರಿ ತೊರೆಯ ಪಾಯ್ವುದಕ್ಕೆ ತೆರನಿಲ್ಲದೆ, ಅದರಡಿಯಲ್ಲಿ ತುಂಬಿ ಸೂಸುವ ತೆರ ನಿಮಗಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Mānsapiṇḍava kaḷedu mantrapiṇḍava māḍidevendu santaisikombādyaru nīvu kēḷirayyā. Bhramara kīṭakava tandaḷidu tannante māḍidudillave? Cakra mr̥ttikeya tandu tanna nenahinalli tōrida guṇa kumbhava māḍidudillave ? Kārukaśileya tandu tanna manakke tōrida svarūpava māḍidudillave? Intivellavu hiḍidavara guṇakkoḷagādavu. Idanariyade nāvu guruvādevendu, idiru śiṣyarendu bhāvisi, sēveya komba guru, harida harugōlanēri toreya pāyvudakke teranillade, adaraḍiyalli tumbi sūsuva tera nimagāyittu, niḥkaḷaṅka mallikārjunā. Read More