ಮಾಯೆ ತನ್ಮಯವೆಂಬ ಭವಜನ್ಮದಲ್ಲಿ ಬಂದು,
ಗೋರಸವನೆ ಉಂಡು ನಾಚದೇಕೆ ಮನ ? ಹೇಸದೇಕೆ ಮನ ?
ತಿತ್ತಿಯ ಹಿಡಿದ ಮಾದಿಗನಿಗೆ,
ಹೊತ್ತಿದ ಮೂಗಿನ ನಾತ ನಿಶ್ಚಯವುಂಟೆ, ಇತ್ತಣವರಿಗಲ್ಲದೆ ?
ಕಚ್ಚಿದವನಿಗೆ ಸುಖಸಂಸಾರವೆಂಬಡಗುಮಾಯೆ,
ಮತ್ತತನದಿಂದ ಕೊಂದಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Māye tanmayavemba bhavajanmadalli bandu,
gōrasavane uṇḍu nācadēke mana? Hēsadēke mana?
Tittiya hiḍida mādiganige,
hottida mūgina nāta niścayavuṇṭe, ittaṇavarigallade?
Kaccidavanige sukhasansāravembaḍagumāye,
mattatanadinda kondittu, niḥkaḷaṅka mallikārjunā.
Read More