ಮುತ್ತೊಡೆದ ಚಿಪ್ಪಿನಲ್ಲಿ ನಿವಾಳಿಗಳ ಮಾಡಿ,
ಹೊನ್ನ ಪರಿಯಾಣಂಗಳ ನಡುವೆ ತಂದು, ಮೇಳೈಸಿ,
ಉಟ್ಟ ಪಟ್ಟಾವಳಿಯ, ದೇವಾಂಗದ ಸರ್ವಾಂಗಮಯ ಶೃಂಗಾರದಿಂದ
ಕಳಸಕನ್ನಡಿಯ ಕನ್ನಿಕೆಯರ ಜವಳಿಪಂಕ್ತಿ ಶೋಭಿಸುತ್ತಿರಲು,
ಶಿವಭಕ್ತಜನಸತಿಯರು ನಡೆದು ಬಂದು,
ಸಿಂಹಾಸನದ ಮುಂದೆ ನಿಂದಿರ್ದರು,
ನಿಃಕಳಂಕ ಮಲ್ಲಿಕಾರ್ಜುನ ಪ್ರಭುವಿಂಗೆ
ಆರತಿಯನೆತ್ತಿಹೆವೆಂದು.
Transliteration Muttoḍeda cippinalli nivāḷigaḷa māḍi,
honna pariyāṇaṅgaḷa naḍuve tandu, mēḷaisi,
uṭṭa paṭṭāvaḷiya, dēvāṅgada sarvāṅgamaya śr̥ṅgāradinda
kaḷasakannaḍiya kannikeyara javaḷipaṅkti śōbhisuttiralu,
śivabhaktajanasatiyaru naḍedu bandu,
sinhāsanada munde nindirdaru,
niḥkaḷaṅka mallikārjuna prabhuviṅge
āratiyanettihevendu.