ಮೂರುಸ್ಥಲದಲ್ಲಿ ಎಯ್ದಿಹೆನೆಂದಡೆ,
ಮಲಮೂರು ಮುಟ್ಟಲೀಸದಿವೆ ನೋಡಾ.
ಆರುಸ್ಥಲದಲ್ಲಿ ಕೂಡಿಹೆನೆಂದಡೆ,
ಅರಿಷಡುವರ್ಗಂಗಳು ಹಗೆಯಾಗಿವೆ ನೋಡಾ.
ಐದು ಗುಣದಲ್ಲಿ ಅರಿದೆಹೆನೆಂದಡೆ,
ಈರೈದು ಕೊಂದು ಕೂಗುತ್ತವೆ ನೋಡಾ.
ಇವರ ಸಂದನಳಿದು ಒಂದರಲ್ಲಿ ಕೂಡೆಹೆನೆಂದಡೆ,
ಇಂದ್ರಿಯಂಗಳ ಬಂಧ ಬಿಡದು.
ಈ ಉಭಯಸಂದೇಹ, ನೀನು ಎನ್ನಲ್ಲಿ ಬಂದಡೆ ಬಿಡುಗು,
ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Mūrusthaladalli eydihenendaḍe,
malamūru muṭṭalīsadive nōḍā.
Ārusthaladalli kūḍ'̔ihenendaḍe,
ariṣaḍuvargaṅgaḷu hageyāgive nōḍā.
Aidu guṇadalli aridehenendaḍe,
īraidu kondu kūguttave nōḍā.
Ivara sandanaḷidu ondaralli kūḍ'̔ehenendaḍe,
indriyaṅgaḷa bandha biḍadu.
Ī ubhayasandēha, nīnu ennalli bandaḍe biḍugu,
niḥkaḷaṅka mallikārjunā.
Read More