ಮೂಲದ್ವಾರದ ಮೂಲೆಯಲ್ಲಿ ಏಳುಮಂದಿ ಕಳ್ಳರಡಗಿ,
ಬಹಳ ಬಂಗಾರವ ಕದ್ದರು ನೋಡಾ.
ಕದ್ದ ಕಳವರಗದೆ ಮತ್ತೊಂದು ಬುದ್ಧಿಯ ನೆನೆದು,
ಹೊದ್ದಿ ಸೇರಿದರು ಮನೆಯಾತನ.
ಅವನಿರುವ ಹೆಜ್ಜೆಯನರಿದು ಎದ್ದು ಹಿಡಿದ.
ಕೈಯೊಳಗಾದರು, ಕಳ್ಳರು ಬೆಳ್ಳರೆಂದು ಹೋದರೆ,
ಇದ ಬಲ್ಲವರಾರೊ, ನಿಃಕಳಂಕ ಮಲ್ಲಿಕಾರ್ಜುನಾ ?
Transliteration (Vachana in Roman Script) Mūladvārada mūleyalli ēḷumandi kaḷḷaraḍagi,
bahaḷa baṅgārava kaddaru nōḍā.
Kadda kaḷavaragade mattondu bud'dhiya nenedu,
hoddi sēridaru maneyātana.
Avaniruva hejjeyanaridu eddu hiḍida.
Kaiyoḷagādaru, kaḷḷaru beḷḷarendu hōdare,
ida ballavarāro, niḥkaḷaṅka mallikārjunā?
Read More