ವಾಯುವ ಹಿಡಿದು, ದಂಡವ ಕೊಂಡು,
ಸಾವರ ಹಿಡಿದು, ಸಂಕಲೆಯನಿಕ್ಕಿ,
ಈ ವಿಧಿಯಲ್ಲಿ ಸಾಯಸಗೊಳ್ಳದೆ,
ಭಾವವಾಡಿದಂತೆ ಭ್ರಮೆಗೊಳಗಾಗದೆ,
ಮತ್ತಿವನೇನನೂ ಎನ್ನದಿರ್ಪುದೆ, ಸರ್ವಜ್ಞಾನದೊಳಗು.
ಆ ನಿಜವಸ್ತು, ತಾನು ತಾನೆ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script)Vāyuva hiḍidu, daṇḍava koṇḍu,
sāvara hiḍidu, saṅkaleyanikki,
ī vidhiyalli sāyasagoḷḷade,
bhāvavāḍidante bhramegoḷagāgade,
mattivanēnanū ennadirpude, sarvajñānadoḷagu.
Ā nijavastu, tānu tāne,
niḥkaḷaṅka mallikārjunā. Read More
ವಚನಕಾರ ಮಾಹಿತಿ
ಮೋಳಿಗೆ ಮಾರಯ್ಯ
ಅಂಕಿತನಾಮ:
ನಿ:ಕಳಂಕ ಮಲ್ಲಿಕಾರ್ಜುನ
ವಚನಗಳು:
815
ಕಾಲ:
12ನೆಯ ಶತಮಾನ
ಕಾಯಕ:
ಮಹಾರಾಜ-ಕಾಡಿನಿಂದ ಉರುವಲು ಕಟ್ಟಿಗೆ ತಂದು ಊರೊಳಗೆ ಮಾರುವುದು.