ವ್ರತನೇಮ ನಿತ್ಯಕೃತ್ಯವ ಮಾಡುವ ಸತ್ಯರುಗಳು ಕೇಳಿರೋ.
ಲಿಂಗಕ್ಕೆ ಜಂಗಮ ವಿಶೇಷವೆಂದು,
ಆ ಜಂಗಮದ ಪಾದೋದಕದಲ್ಲಿ ಮಜ್ಜನಂಗೆಯ್ದು,
ಪ್ರಸಾದದಿಂದ ಸಮರ್ಪಣವ ಮಾಡಿ,
ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ
ಲಿಂಗ ಪ್ರಾಣ ಜಂಗಮವೆಂದು ಮಾಡಿ,
ಮತ್ತಾ ಜಂಗಮ ಮನೆಗೆ ಬಂದಡೆ
ಸಂದೇಹವ ಮಾಡಲೇಕೆ?
ತನ್ನ ಪ್ರಾಣ ಲಿಂಗವೆಂದರಿದು,
ಲಿಂಗದ ಪ್ರಾಣ ಜಂಗಮವೆಂದರಿದು,
ಉಭಯಪ್ರಾಣ ತತ್ಪ್ರಾಣವಾದ ಮತ್ತೆ,
ಭಕ್ತಿಗೆ ಅವಿಶ್ವಾಸವಾಗಲೇಕೆ ?
ಆ ಜಂಗಮ ಹೆಣ್ಣ ಬೇಡಿದಡೆ ಆಶಕನೆಂದು,
ಮಣ್ಣ ಬೇಡಿದಡೆ ಬದ್ಧಕನೆಂದು,
ಹೊನ್ನ ಬೇಡಿದಡೆ ಸಂಸಾರಿಯೆಂದು ಇಷ್ಟನೆಂದ ಮತ್ತೆ,
ಭಕ್ತಿಯ ವಾಸಿಗೆ ಹೋರಲೇಕೆ ?
ಎಷ್ಟು ಕಾಲ ಮಾಡಿದ ದ್ರವ್ಯ ಸವೆದಡೆ, ಭಕ್ತಿಗೆ ಸಲ್ಲ, ಮುಕ್ತಿ ಇಲ್ಲ.
ವಿಶ್ವಾಸಹೀನಂಗೆ ಸತ್ಯಭಕ್ತಿ ಹುಸಿಯೆಂದೆ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Vratanēma nityakr̥tyava māḍuva satyarugaḷu kēḷirō.
Liṅgakke jaṅgama viśēṣavendu,
ā jaṅgamada pādōdakadalli majjanaṅgeydu,
prasādadinda samarpaṇava māḍi,
aṣṭavidhārcane ṣōḍaśōpacāradinda
liṅga prāṇa jaṅgamavendu māḍi,
mattā jaṅgama manege bandaḍe
sandēhava māḍalēke?
Tanna prāṇa liṅgavendaridu,
Liṅgada prāṇa jaṅgamavendaridu,
ubhayaprāṇa tatprāṇavāda matte,
bhaktige aviśvāsavāgalēke?
Ā jaṅgama heṇṇa bēḍidaḍe āśakanendu,
maṇṇa bēḍidaḍe bad'dhakanendu,
honna bēḍidaḍe sansāriyendu iṣṭanenda matte,
bhaktiya vāsige hōralēke?
Eṣṭu kāla māḍida dravya savedaḍe, bhaktige salla, mukti illa.
Viśvāsahīnaṅge satyabhakti husiyende,
niḥkaḷaṅka mallikārjunā.
Read More