ಸಾಸಿವೆಯ ಮೊನೆಯೊಳಗಡಗಿದ ಗುಂಗುರು,
ಈ ದೀಪದ ವೇಷಧಾರಿಗಳೆಲ್ಲರ ನುಂಗಿ,
ಮತ್ತೆ ಆಸೆ ಹಿಂಗದೆ, ಮೂರು ವೇಷವ ನುಂಗಿತ್ತು.
ಈ ಪಾಶವ ಬಿಡಿಸಾ, ಈಷಣತ್ರಯದೂರ
ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script)Sāsiveya moneyoḷagaḍagida guṅguru,
ī dīpada vēṣadhārigaḷellara nuṅgi,
matte āse hiṅgade, mūru vēṣava nuṅgittu.
Ī pāśava biḍisā, īṣaṇatrayadūra
niḥkaḷaṅka mallikārjunā.
Read More
ವಚನಕಾರ ಮಾಹಿತಿ
ಮೋಳಿಗೆ ಮಾರಯ್ಯ
ಅಂಕಿತನಾಮ:
ನಿ:ಕಳಂಕ ಮಲ್ಲಿಕಾರ್ಜುನ
ವಚನಗಳು:
815
ಕಾಲ:
12ನೆಯ ಶತಮಾನ
ಕಾಯಕ:
ಮಹಾರಾಜ-ಕಾಡಿನಿಂದ ಉರುವಲು ಕಟ್ಟಿಗೆ ತಂದು ಊರೊಳಗೆ ಮಾರುವುದು.