ಹಿರಿದಪ್ಪ ಮಹಾಮೇರುವೆಯ ತುದಿಯಲ್ಲಿ,
ಒಂದು ಅರಗಿನ ಗಿಳಿ ತತ್ತಿಯನಿಕ್ಕಿ,
ತತ್ತಿಯ ಆ ಗಿರಿ ನುಂಗಿತ್ತ ಕಂಡೆ.
ಗಿಳಿಯ ಕುರುಹಿಲ್ಲದೆ ಹಾರಿಹೋಯಿತ್ತು.
ನಿಃಕಳಂಕ ಮಲ್ಲಿಕಾರ್ಜುನಾ, ನೀವೇ ಬಲ್ಲಿರಿ.
Transliteration Hiridappa mahāmēruveya tudiyalli,
ondu aragina giḷi tattiyanikki,
tattiya ā giri nuṅgitta kaṇḍe.
Giḷiya kuruhillade hārihōyittu.
Niḥkaḷaṅka mallikārjunā, nīvē balliri.