•  
  •  
  •  
  •  
Index   ವಚನ - 71    Search  
 
ಘ್ರಾಣಕ್ಕೂ ಗುದಕ್ಕೂ ಪೃಥ್ವಿ ಎಂಬ ಮಹಾಭೂತ. ಅಲ್ಲಿ ನಿವೃತ್ತಿ ಎಂಬ ಕಲೆ ಇಹುದು. ಆ ಕಲೆಯಲ್ಲಿ, ಕ್ರಿಯಾಶಕ್ತಿಯುಕ್ತವಾದ ಆಚಾರಲಿಂಗವ ಧರಿಸಿದಾತ ಭಕ್ತನು. ಜಿಹ್ವೆಗೂ ಗುಹ್ಯಕ್ಕೂ ಅಪ್ಪು ಎಂಬ ಮಹಾಭೂತ. ಅಲ್ಲಿ ಪ್ರತಿಷ್ಠೆಎಂಬ ಕಲೆ ಇಹುದು. ಆ ಕಲೆಯಲ್ಲಿ, ಜ್ಞಾನಶಕ್ತಿಯುಕ್ತವಾದ ಗುರುಲಿಂಗವ ಧರಿಸಿದಾತ ಮಾಹೇಶ್ವರನು. ನೇತ್ರಕ್ಕೂ ಪಾದಕ್ಕೂ ಅಗ್ನಿ ಎಂಬ ಮಹಾಭೂತ. ಅಲ್ಲಿ ವಿದ್ಯೆ ಎಂಬ ಕಲೆ ಇಹುದು. ಆ ಕಲೆಯಲ್ಲಿ, ಇಚ್ಛಾಶಕ್ತಿಯುಕ್ತವಾದ ಶಿವಲಿಂಗವ ಧರಿಸಿಕೊಂಡಾತ ಪ್ರಸಾದಿ. ತ್ವಕ್ಕಿಗೂ ಪಾಣಿಗೂ ವಾಯುವೆಂಬ ಮಹಾಭೂತ. ಅಲ್ಲಿ ಶಾಂತಿ ಎಂಬ ಕಲೆ ಇಹುದು. ಆ ಕಲೆಯಲ್ಲಿ, ಆದಿಶಕ್ತಿಯುಕ್ತವಾದ ಜಂಗಮಲಿಂಗವ ಧರಿಸಿಕೊಂಡಾತ ಪ್ರಾಣಲಿಂಗಿ. ಶ್ರೋತ್ರಕ್ಕೂ ವಾಕ್ಕಿಗೂ ಆಕಾಶ ಎಂಬ ಮಹಾಭೂತ. ಅಲ್ಲಿ ಶಾಂತ್ಯತೀತ ಎಂಬ ಕಲೆ ಇಹುದು. ಆ ಕಲೆಯಲ್ಲಿ, ಪರಾಶಕ್ತಿಯುಕ್ತವಾದ ಪ್ರಸಾದಲಿಂಗವ ಧರಿಸಿಕೊಂಡಾತ ಶರಣನು. ಆತ್ಮಾಂಗಕ್ಕೆ ಮನ ಎಂಬ ಮಹಾಭೂತ. ಅಲ್ಲಿ ಶಾಂತ್ಯತೀತೋತ್ತರ ಎಂಬ ಕಲೆ ಇಹುದು. ಆ ಕಲೆಯಲ್ಲಿ, ಚಿಚ್ಛಕ್ತಿಯುಕ್ತವಾದ ಮಹಾಲಿಂಗವ ಧರಿಸಿಕೊಂಡಾತ ಐಕ್ಯನು. ಇಂತೀ ಷಡುಸ್ಥಲಭಕ್ತರು ಷಡ್ವಿಧಲಿಂಗವ ಧರಿಸಿ ನಿರಾಳಲಿಂಗಾರ್ಚನೆಯ ಮಾಡುತ್ತಿಹರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಶರಣರು.
Transliteration (Vachana in Roman Script) Ghrāṇakkū gudakkū pr̥thvi emba mahābhūta. Alli nivr̥tti emba kaleyihudu. Ā kaleyalli, kriyāśaktiyuktavāda ācāraliṅgava dharisidāta bhaktanu. Jihvegū guhyakkū appu emba mahābhūta. Alli pratiṣe* emba kaleyihudu. Ā kaleyalli, jñānaśaktiyuktavāda guruliṅgava dharisidāta māhēśvaranu. Nētrakkū pādakkū agni emba mahābhūta. Alli vidye emba kaleyihudu. Ā kaleyalli, icchāśaktiyuktavāda śivaliṅgava dharisikoṇḍāta prasādi. Tvakkigū pāṇigū vāyuvemba mahābhūta. Alli śānti emba kaleyihudu. Ā kaleyalli, ādiśaktiyuktavāda jaṅgamaliṅgava dharisikoṇḍāta prāṇaliṅgi. Śrōtrakkū vākkigū ākāśa emba mahābhūta. Alli śāntyatīta emba kaleyihudu. Ā kaleyalli, parāśaktiyuktavāda prasādaliṅgava dharisikoṇḍāta śaraṇanu. Ātmāṅgakke mana emba mahābhūta. Alli śāntyatītōttara emba kaleyihudu. Ā kaleyalli, cicchaktiyuktavāda mahāliṅgava dharisikoṇḍāta aikyanu. Intī ṣaḍusthalabhaktaru ṣaḍvidhaliṅgava dharisi nirāḷaliṅgārcaneya māḍuttiharu, nijaguru svatantrasid'dhaliṅgēśvara prabhuvē. Read More