•  
  •  
  •  
  •  
Index   ವಚನ - 82    Search  
 
ಭೂಮಿ ಜಲ ಅಗ್ನಿ ಮರುತ ಆಕಾಶವೆಂಬವೆಲ್ಲ, ಶ್ರೀವಿಭೂತಿಮಯವಾಗಿ ತೋರುತ್ತಿವೆ, ಶಿವ ಶಿವಾ. ಮನ ಚಕ್ಷುರಾದಿ ಇಂದ್ರಿಯಂಗಳೆಲ್ಲವು ಶ್ರೀ ವಿಭೂತಿಮಯವಾಗಿ ತೋರುತ್ತಿವೆ, ಶಿವ ಶಿವಾ. ಚಂದ್ರ ಆದಿತ್ಯ ಸರ್ವದೇವತಾರೂಪವೆಲ್ಲ ಶ್ರೀ ವಿಭೂತಿಮಯವಾಗಿ ತೋರುತ್ತಿವೆ, ಶಿವ ಶಿವಾ. ಈ ಪರಿಯಿಂದ ತೋರಿ, ವ್ಯಾಪಕವಾಗಿ ಬೆಳಗುವ, ಪರಂಜ್ಯೋತಿ ಸ್ವರೂಪ ವಿಭೂತಿಯೆಂದು, ಒಲಿದು ಧರಿಸಿದವನೇ ಜೀವನ್ಮುಕ್ತನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.
Transliteration (Vachana in Roman Script) Bhūmi jala agni maruta ākāśavembavella, śrīvibhūtiyavāgi tōruttive, śiva śivā. Mana cakṣurādi indriyaṅgaḷellavu śrī vibhūtimayavāgi tōruttive, śiva śivā. Candra āditya sarvadēvatārūpavella śrī vibhūtimayavāgi tōruttive, śiva śivā. Ī pariyinda tōri, vyāpakavāgi beḷaguva, paran̄jyōti svarūpa vibhūtiyendu, olidu dharisidavanē jīvanmuktanayyā, nijaguru svatantrasid'dhaliṅgēśvara. Read More