ಶಿವಭಕ್ತಿತತ್ಪರನಾದ ಮಹಿಮನು
ವಿಷಯಭ್ರಮೆ ಪುರುಷ ಪ್ರಯತ್ನವನು ಬಿಟ್ಟಾಗವೆ,
ಆಗಾಮಿಕರ್ಮ ನಾಶವಾಯಿತ್ತು.
ಸಂಚಿತಕರ್ಮ ವಿಷಯಾಸಕ್ತಂಗೆ ಪ್ರಾರಬ್ಧವೆನಿಸುವುದು.
ಶಿವಧ್ಯಾನೈಕ ಚಿತ್ತಂಗೆ ಸಂಚಿತಕರ್ಮವಿಲ್ಲ.
ಅದೇನು ಕಾರಣವೆಂದಡೆ:
ಶಿವಜ್ಞಾನಾಗ್ನಿಯಿಂದ ಅದು ಬೆಂದು ಹೋಹುದಾಗಿ.
ಇಚ್ಛಾ ಪ್ರಾರಬ್ಧ ಅನಿಚ್ಛಾ ಪ್ರಾರಬ್ಧವೆಂದು ಪ್ರಾರಬ್ಧವೆರಡಾಗಿಹುದು.
``ಪ್ರಾರಬ್ಧ ಕರ್ಮಣಾಂ ಭೋಗಾದೇವ ಕ್ಷಯಃ' ಎಂದುದಾಗಿ,
ಅದು ಭೋಗಿಸಿದಲ್ಲದೆ ತೀರದು.
ಅನಿಚ್ಛಾ ಪ್ರಾರಬ್ಧದಿಂದ ಮುಂದೆ ಸುಖವಹುದು.
ಇಚ್ಛಾ ಪ್ರಾರಬ್ಧದಿಂದ ದುಃಖವಹುದಾಗಿ,
ಆ ದುಃಖದಿಂದ ಸಂಸಾರವೃಕ್ಷ ಬೇರುವರಿವುದು.
ಸಂಸಾರ, ವಿರಕ್ತಂಗೆ ಹುರಿದ ಬೀಜದಂತೆ
ಅಂಕುರ ನಷ್ಟವಾಗಿಹುದು.
ಆತ ಶಿವನೊಡನೆ ಕೂಡಿ ಭೋಗಿಸುವನಾಗಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ನಿಜವನೆಯ್ದುವನು.
Transliteration (Vachana in Roman Script) Śivabhaktitatparanāda mahimanu
viṣayabhrame puruṣa prayatnavanu biṭṭāgave,
āgāmikarma nāśavāyittu.
San̄citakarma viṣayāsaktaṅge prārabdhavenisuvudu.
Śivadhyānaika cittaṅge san̄citakarmavilla.
Adēnu kāraṇavendaḍe:
Śivajñānāgniyinda adu bendu hōhudāgi.
Icchā prārabdha anicchā prārabdhavendu prārabdhaveraḍāgihudu.
``Prārabdha karmaṇāṁ bhōgādēva kṣayaḥ' endudāgi,
adu bhōgisidallade tīradu.
Anicchā prārabdhadinda munde sukhavahudu.
Icchā prārabdhadinda duḥkhavahudāgi,
ā duḥkhadinda sansāravr̥kṣa bēruvarivudu.
Sansāra, viraktaṅge hurida bījadante
aṅkura naṣṭavāgihudu.
Āta śivanoḍane kūḍi bhōgisuvanāgi,
nijaguru svatantrasid'dhaliṅgēśvaranemba nijavaneyduvanu.
Read More