•  
  •  
  •  
  •  
Index   ವಚನ - 156    Search  
 
ಜಪ ತಪ ನಿತ್ಯ ನೇಮ ವ್ರತ ಶೀಲಂಗಳೆಂಬ ಸರ್ವೋಪಾಯಂಗಳಿಂದ ಶಿವನ ಸಾಧಿಸಿ ಭೇದಿಸಿ ಕಂಡೆಹೆವೆಂಬ ಉಪಾಯಸಾಧಕರು ನೀವು ಕೇಳಿ. ಆ ಉಪಾಯಂಗಳನೂ ಶಿವಪ್ರಸನ್ನಿಕೆಯಿಂದ ಪಡೆದು ಶುದ್ಧ ಸಂಸಾರಿಗಳಾದ ಜ್ಞಾನಿಗಳು ಸ್ವಯಂಪ್ರಕಾಶವಾಗಿಯು ವಿಶ್ವಪ್ರಕಾಶನಾದ `ಸತ್ಯಜ್ಞಾನಮನಂತಂ ಬ್ರಹ್ಮ'ವೆಂಬ ಲಕ್ಷಣವುಳ್ಳ ಪರಿಪೂರ್ಣ ಪರಶಿವನ ಜ್ಞೇಯಸ್ವರೂಪದಿಂದರಿದವರು ಜೀವನ್ಮುಕ್ತರಾಗಿ ವರ್ತಿಸುತ್ತಿಹರು ಕಾಣಾ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.
Transliteration (Vachana in Roman Script) Japa tapa nitya nēma vrata śīlaṅgaḷemba sarvōpāyaṅgaḷinda śivana sādhisi bhēdisi kaṇḍ'̔ehevemba upāyasādhakaru nīvu kēḷi. Ā upāyaṅgaḷanū śivaprasannikeyinda paḍedu śud'dha sansārigaḷāda jñānigaḷu svayamprakāśavāgiyu viśvaprakāśanāda `satyajñānamanantaṁ brahma'vemba lakṣaṇavuḷḷa paripūrṇa paraśivana jñēyasvarūpadindaridavaru jīvanmuktarāgi vartisuttiharu kāṇā nijaguru svatantrasid'dhaliṅgēśvara. Read More