ಸೂರ್ಯೋದಯವಾಗೆ ತಿಮಿರ ಉಂಟೆ ಹೇಳ?
ಪರುಷವೇಧಿಯ ಸಾಧಿಸಿದವಂಗೆ ದಾರಿದ್ರ್ಯ ಉಂಟೆ ಹೇಳ?
ಶಿವಜ್ಞಾನಸಂಪನ್ನನಾದ ಜ್ಯೋತಿರ್ಮಯಲಿಂಗಿಗೆ ಅಂಗವುಂಟೇ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೇ ತಾನಾದವಂಗೆ.
Transliteration Sūryōdayavāge timira uṇṭe hēḷa?
Paruṣavēdhiya sādhisidavaṅge dāridrya uṇṭe hēḷa?
Śivajñānasampannanāda jyōtirmayaliṅgige aṅgavuṇṭē?
Nijaguru svatantrasid'dhaliṅgēśvaranē tānādavaṅge.