ಆವಾವ ಜಾತಿ ಯೋನಿಗಳಲ್ಲಿ ಹುಟ್ಟಿದ ಪ್ರಾಣಿಗಳು
ಆ ಜಾತಿಯಂತಹವಲ್ಲದೆ ಮತ್ತೊಂದು ಜಾತಿಯಹರೆ ಹೇಳಾ.
"ಯಥಾ ಬೀಜಸ್ತಥಾ ವೃಕ್ಷಃ" ಎಂಬ ನ್ಯಾಯದಂತೆ,
ಲಿಂಗದಿಂದೊಗೆದ ಶರಣ ಲಿಂಗವಹನಲ್ಲದೆ,
ಮಾನವನಾಗಲರಿಯನೆಂಬುದಕ್ಕೆ ಗುರುವಚನವೇ ಪ್ರಮಾಣು.
ಇಂತಿದನರಿಯದೆ,
ನಾನು ಮಾನವನು ದೇಹಿ ಸಂಸಾರಬದ್ಧನು ಎಂಬವಂಗೆ,
ಎಂದೆಂದು ಮುಕ್ತಿಯಿಲ್ಲ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ಮಾನವನಲ್ಲ.
Transliteration Āvāva jāti yōnigaḷalli huṭṭida prāṇigaḷu
ā jātiyantahavallade mattondu jātiyahare hēḷā.
Yathā bījastathā vr̥kṣaḥ emba n'yāyadante,
liṅgadindogeda śaraṇa liṅgavahanallade,
mānavanāgalariyanembudakke guruvacanavē pramāṇu.
Intidanariyade,
nānu mānavanu dēhi sansārabad'dhanu embavaṅge,
endendu muktiyilla,
nijaguru svatantrasid'dhaliṅgēśvarana śaraṇa mānavanalla.