ಅದ್ವೈತವ ಸಾಧಿಸಿ ಸರ್ವವೂ ಶಿವನೆಂಬರು ಎನಲಾಗದು.
ಸರ್ವಕ್ಕೂ ಲಯ ಗಮನವುಂಟು ಶಿವಂಗಿಲ್ಲವಾಗಿ.
ಯಂತ್ರವಾಹಕನೆಲ್ಲಿಯೂ ಪರಿಪೂರ್ಣವಾಗಿಹನೆಂದಡೆ
ಎಲ್ಲವೂ ಶಿವನಾಗಬಲ್ಲವೆ? ಆಗಲರಿಯವು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು,
ಪದ್ಮಪತ್ರಜಲದಂತೆ ಹೊದ್ದಿಯು ಹೊದ್ದದಂತಿಹನು.
Transliteration Advaitava sādhisi sarvavū śivanembaru enalāgadu.
Sarvakkū laya gamanavuṇṭu śivaṅgillavāgi.
Yantravāhakanelliyū paripūrṇavāgihanendaḍe
ellavū śivanāgaballave? Āgalariyavu.
Nijaguru svatantrasid'dhaliṅgēśvaranu,
padmapatrajaladante hoddiyu hoddadantihanu.