ಸರ್ವೇಂದ್ರಿಯಂಗಳಲ್ಲಿ ಸರ್ವಮುಖವಾಗಿ ಬಂದ ಪದಾರ್ಥದ
ಪೂರ್ವಾಶ್ರಯವ ಕಳೆದು, ಅವಧಾನದಿಂದ ಕೊಂಬಾತ
ನೀನಾದ ಕಾರಣ,
ನಾನು ಅರಿದುಕೊಡಬೇಕೆಂಬ ಅವಧಾನವೆನಗಿಲ್ಲಯ್ಯ.
ಅದೇನು ಕಾರಣವೆಂದಡೆ:
ಎನ್ನಂಗ ಮನ ಪ್ರಾಣ ಇಂದ್ರಿಯಂಗಳು ನಿನ್ನವಾಗಿ.
ಅಲ್ಲಿ ಅರಿದು ಭೋಗಿಸುವ ಭೋಗಮೂರ್ತಿ ನೀನೆಯಯ್ಯ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.
Transliteration (Vachana in Roman Script) Sarvēndriyaṅgaḷalli sarvamukhavāgi banda padārthada
pūrvāśrayava kaḷedu, avadhānadinda kombāta
nīnāda kāraṇa,
nānu aridukoḍabēkemba avadhānavenagillayya.
Adēnu kāraṇavendaḍe:
Ennaṅga mana prāṇa indriyaṅgaḷu ninnavāgi.
Alli aridu bhōgisuva bhōgamūrti nīneyayya,
nijaguru svatantrasid'dhaliṅgēśvara.
Read More