•  
  •  
  •  
  •  
Index   ವಚನ - 269    Search  
 
ಇಂಬಾದ ಬ್ರಹ್ಮದಲ್ಲಿ ತುಂಬಿದ ಜಗವೆಲ್ಲಾ ಸಂಭ್ರಮಿಸುತ್ತದೆ ಸಂಸಾರದಲ್ಲಿ. ಕುಂಭದೊಳಗಣ ಸುಧೆಯನುಂಬ ಭೇದವನರಿಯದೆ ಸುಂಬಳಗುರಿಯಂತಾದವು ಜಗವೆಲ್ಲವು. ಒಂಭತ್ತುನಾಳದೊಳಗಣ ಮಧ್ಯನಾಳದ ಬೆಂಬಳಿಯಲ್ಲಿ ಎಯ್ದಿದಾತಗೆ ಸುಧೆ ಸಾಧ್ಯವು. ತೊಂಬತ್ತಾರು ಅಂಗುಲ ದೇಹವೆಲ್ಲವನೂ ತುಂಬುವುದು. ಮತ್ತಂತು ಆ ಸುಧೆಯನು ಹಂಬಲಿಸಲೇಕೆ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಹಂಬಲವನು ಬಿಡದಿರ್ದಡಾತ ಯೋಗಿ.
Transliteration Imbāda brahmadalli tumbida jagavellā sambhramisuttade sansāradalli. Kumbhadoḷagaṇa sudheyanumba bhēdavanariyade sumbaḷaguriyantādavu jagavellavu. Ombhattunāḷadoḷagaṇa madhyanāḷada bembaḷiyalli eydidātage sudhe sādhyavu. Tombattāru aṅgula dēhavellavanū tumbuvudu. Mattantu ā sudheyanu hambalisalēke? Nijaguru svatantrasid'dhaliṅgēśvarana hambalavanu biḍadirdaḍāta yōgi.